Monday, March 11, 2024

100 ದಿನಗಳ ಓದುವ ಅಭಿಯಾನ 2024-25



100 ದಿನಗಳ ಓದುವ ಅಭಿಯಾನದ ಶಾಲಾ ವರದಿ.

ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸುವುದರೊಂದಿಗೆ ಭಾಷಾ ಕೌಶಲ್ಯವನ್ನು ಅಭಿವೃದ್ಧಿಗೊಳಿಸಬೇಕಿದೆ ಹಾಗಾಗಿ 100 ದಿನಗಳು ಓದುವ ಆಂದೋಲನವನ್ನು ರಾಜ್ಯ ವ್ಯಾಪಿ ಎಲ್ಲಾ ಬಾಲವಾಟಿಕ ಪೂರ್ವ ಪ್ರಾಥಮಿಕ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿನ ಒಂದರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಅನ್ವಯಿಸುವಂತೆ ಮೂರು ಗುಂಪುಗಳಲ್ಲಿ ಅನುಷ್ಠಾನಗೊಳಿಸಲು 2023 24ನೇ ಸಾಲಿನ ಬಿ ಎ ಬಿ Plan Document ನಲ್ಲಿ ಯೋಜಿಸಲಾಗಿದೆ.

NIPUN ಭಾರತ ಮಿಷನ್ ಆಶಯದಂತೆ FLN ಚಟುವಟಿಕೆಗಳನ್ನು ನಿರ್ವಹಿಸುವುದರ ಮೂಲಕ ಮಕ್ಕಳಲ್ಲಿ ಓದುವ ಬರೆಯುವ ಹಾಗೂ ಅರ್ಥೈಸಿಕೊಳ್ಳುವ ಮತ್ತು ಸಂತೋಷದಿಂದ ಭಾಷಾ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಬೇಕಾಗಿದೆ.ಈ ಉದ್ದೇಶದಿಂದ ಓದುವ ಆಂದೋಲನದ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೈಗೊಳ್ಳಬೇಕಾಗಿರುವ ಕಾರ್ಯ ಚಟುವಟಿಕೆಗಳ ವಿವರಗಳನ್ನು ಒಳಗೊಂಡ ವೇಳಾಪಟ್ಟಿಯನ್ನು ಮತ್ತು ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಸಮಗ್ರ ಶಿಕ್ಷಣ ಕರ್ನಾಟಕ ಇವರ ಸುತ್ತೋಲೆಯಲ್ಲಿ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ.

ಅನುಷ್ಠಾನಗೊಳಿಸಬೇಕಾದ ಗುಂಪುಗಳು ತರಗತಿವಾರು ಮಕ್ಕಳು :

ಗುಂಪು 1 : ಬಾಲವಾಟಿಕಾದಿಂದ 2 ನೇ ತರಗತಿಯವರೆಗೆ

ಗುಂಪು 2 : 3 ರಿಂದ 5 ನೇ ತರಗತಿವರೆಗೆ

ಗುಂಪು 3 : 6 ರಿಂದ 8 ನೇ ತರಗತಿವರೆಗೆ 

ಆಂದೋಲನದ ಅವಧಿ :

100 ದಿನಗಳು ( 14 ವಾರಗಳು ) ದಿನಾಂಕ : 04.11.2024 ರಿಂದ 11.02.2025


ಕ್ರ.ಸಂ. ವಾರ ಗುಂಪು  ಚಟುವಟಿಕೆ ವಿವರ ಭಾಗವಹಿಸಿದ ಮಕ್ಕಳ ಸಂಖ್ಯೆ ವಿವರ
1 1 ನೇ ವಾರ ಗುಂಪು 1, 2 & 3
ಶಾಲಾ ಗ್ರಂಥಾಲಯಕ್ಕೆ ಭೇಟಿ 
ವರ್ಣಮಾಲಾ ಪ್ರಪಂಚ 
ಕುಟುಂಬದ ಕಥೆಗಳು
71
ಇಂದು ದಿನಾಂಕ 04.11.2024 ರಂದು 100 ದಿನಗಳ ಓದುವ ಅಭಿಯಾನಕ್ಕೆ ಶಾಲಾ ಗ್ರಂಥಾಲಯಕ್ಕೆ ಭೇಟಿ ನೀಡುವುದರ ಮೂಲಕ ಚಾಲನೆ ನೀಡಲಾಯಿತು.
2 2 ನೇ ವಾರ ಗುಂಪು 1,2 & 3 ಹಣ್ಣುಗಳು & ಹೂವುಗಳು, ಉಡುಗೆ-ಹೇಳುವುದು, ಓದು-ಬರೆ 71 ಈ ವಾರ 100 ದಿನಗಳ ಓದುವ ಅಭಿಯಾನ ಕಾರ್ಯಕ್ರಮದಲ್ಲಿ ಹೂವುಗಳ ಹಣ್ಣುಗಳ ಪಟ್ಟಿ ಬರೆಯುವುದು, ಓದುವುದು, ಕವಿಗಳ ಉಡುಗೆ ಧರಿಸಿ ಕಥೆ ಕವನ ಓದುವುದು ಹಾಗೂ ಓದಿದ ಕಥೆಯನ್ನು ಬರೆಯುವ ಚಟುವಟಿಕೆ ನಿರ್ವಹಿಸಲಾಯಿತು.
33 ನೇ ವಾರಗುಂಪು 1,2 & 3ಚಾಲ್ತಿಯಲ್ಲಿರುವ ಕವಿತೆ, ಬೆಂಡ್‌ ದಿ ಎಂಡ್‌, ಕವನ ಓದುವುದು71100 ದಿನಗಳ ಓದುವ ಅಭಿಯಾದ ಚಟುವಿಕೆಗಳಿಗಾಗಿ ಚಾಲ್ತಿಯಲ್ಲಿರುವ ಕವಿತೆ ಬೆಂಡ್ ದಿ ಎಂಡ್ ಕವನ ಓದು ಇವುಗಳನ್ನು ನಿರ್ವಹಿಸಲಾಯಿತು. ಮಕ್ಕಳು ತಮಗೆ ಇಷ್ಟವಾದ ಕಥೆ ಹಾಗೂ ಕವನಗಳನ್ನು ಬರೆದು ಓದಿದರು.
4 4 ನೇ ವಾರ ಗುಂಪು 1,2 & 3 ಹಂಚಿಕೆ ಓದು, ಸನ್ನಿವೇಶ ರಚನೆ, ವಿನೋದಕ್ಕಾಗಿ ಓದು 70 ಮಕ್ಕಳಿಗೆ ಗುಂಪು ಮಾಡಿ ಓದಲು ತಿಳಿಸಲಾಯಿತು. ಚಿತ್ರ ಕಾರ್ಡ್‌ ಗಳನ್ನು ನೀಡಿ ಹಾಗೂ ಅದಕ್ಕೆಸಂಬಂಧಿಸಿದ ವಾಕ್ಯದ ಕಾರ್ಡ ಗಳನ್ನು ಜೋಡಿಸುವ ಚಟುವಟಿಕೆ.
5 5 ನೇ ವರ ಗುಂಪು 1,2,3 ವಿನೋದಕ್ಕಾಗಿ ಓದು, ಪಾತ್ರಗಳ ಪರಿಚಯ, ಗ್ರಂಥಾಲಯಕ್ಕೆ ಭೇಟಿ 70 ಈ ವಾರ ಶಾಲಾ ಗ್ರಂಥಾಲಯಕ್ಕೆ ಭೇಟಿ ನೀಡಿ ಇಷ್ಟವಾದ ಪುಸ್ತಕಗಳನ್ನು ಓದಿದರು ತಾವು ಓದಿದ ಕಥೆಗಳಲ್ಲಿನ ಪಾತ್ರಗಳನ್ನು ಪಟ್ಟಿ ಮಾಡಿದರು. ಹಾಗೂ ಆ ಪಾತ್ರಗಳ ಪರಿಚಯ ಮಾಡಿಕೊಂಡು ಓದಿದರು.
6 6 ನೇ ವಾರ ಗುಂಪು 1,2,3 ಶೀರ್ಷಿಕೆ ಮರ, ಸಾಹಿತ್ಯ ಕ್ಯಾಲೆಂಡರ್‌, ಪಾಕವಿಧಾನ 70 ಮೊದಲ ಗುಂಪಿನ ಮಕ್ಕಳು ಕಥೆಯನ್ನು ಓದಿ ಅದಕ್ಕೆ ಮಕ್ಕಳು ತಮಗೆ ಇಷ್ಟವಾದ ಶೀರ್ಷಿಕೆಯನ್ನು ಹೇಳಿದರು ಅದನ್ನು ಶೀರ್ಷಿಕೆ ಮರದಲ್ಲಿ ಬರೆಯಲಾಯಿತು. ಹಾಗೂ ಎರಡನೆ ಗುಂಪಿನ ಮಕ್ಕಳು ಡಿಸೆಂಬರ್‌ ತಿಂಗಳಿನಲ್ಲಿ ಜನಿಸಿದ ಸಾಹಿತಿಗಳ ಮಾಹಿತಿಯುಳ್ಳ ಸಾಹಿತ್ಯ ಕ್ಯಾಲೆಂಡರ್‌ ತಯಾರಿಸಿದರು. ಮೂರನೆ ಗುಂಪಿನವರು ಪಾಕವಿಧಾನದಲ್ಲಿ ಚಟುವಟಿಕೆ ನಿರ್ವಹಿಸಿದರು.
7 7 ನೇ ವಾರ ಗುಂಪು 1,2,3 ನಾನು ಯಾರು? , ಮಾತನಾಡು, ಪುಸ್ತಕ ಶಿಪಾರಸ್ಸು 70 ನಾನು ಯಾರು ? ಒಗಟುಗಳನ್ನು ಮಕ್ಕಳಿಗೆ ಕೇಳಿದಾಗ ಮಕ್ಕಳು ಉತ್ತರ ನೀಡಿದರು ಹಾಗೂ ಓದಿದರು, ಮಕ್ಕಳಿಗೆ ಪುಸ್ತಕಗಳನ್ನು ಓದಲು ಕೊಟ್ಟು ಪರಸ್ಪರ ಚರ್ಚಿಸಲು ತಿಳಿಸಲಾಯಿತು.
8 8 ನೇ ವಾರ ಗುಂಪು 1,2,3 ನನ್ನ ಖ್ಯತಿಗಾಗಿ ಪದಗಳು ನನ್ನ ಆಯ್ಕೆ, ರಂಗ ಪರಿಕರಗಳು, ಓದು & ಅಭಿನಯ 68 ಈ ವಾರ ಕಥೆಗಳಲ್ಲಿನ ಹೊಸ ಪದಗಳನ್ನು ಬರೆದು ಓದಿದರು ಹಾಗೂ ರಂಗ ಪರಿಕರಗಳ ಹೆಸರನ್ನು ಪಟ್ಟಿ ಮಾಡಿದರು ಮತ್ತು ತಾವು ಓದಿದ ಕಥೆಯಲ್ಲಿನ ಪಾತ್ರಗಳ ಅಭಿನಯ ಮಾಡಿದರು.
9 9 ನೇ ವಾರ ಗುಂಪು 1,2,3 ಮಾಸಿಕ ಥೀಮ್, ಕವಾನ ಓದುವುದು, ಏಕ್‌ ಭಾರತ ಶ್ರೇಷ್ಠ ಭಾರತ 65 ಕಳೆದ ವಾರ ಓದಿದ ಕಥೆಗಳಲ್ಲಿನ ವಿಷಯದ ಕುರಿತು ಚರ್ಚೆ, ಮಕ್ಕಳು ತಮಗೆ ಇಷ್ಟವಾದ ಕವನ ಓದಿದರು. ಹಾಗೂ ಈ ವಾರ 3 ನೇ ಗುಂಪಿನ ಮಕ್ಕಳು ಏಕ್‌ ಭಾರತ ಶ್ರೇಷ್ಠ ಭಾರತ ಚಟುವಟಿಕೆ ಅಡಿಯಲ್ಲಿ ಉತ್ತರಾಖಂಡ ರಾಜ್ಯದ ವಿಶೇಷ On-Line ರಸಪ್ರಶ್ನೆ ಹಾಗೂ ಅಲ್ಲಿನ ವಿಶೇಷ ಸಾಂಸ್ಕೃತಿಕ ಅಂಶಗಳು ಮತ್ತು ಹಬ್ಬಗಳ ಪರಿಚಯ ಮಾಡಿಕೊಂಡರು
10 10 ನೇ ವಾರ ಗುಂಪು 1,2,3ಏನಾದರೂ ಅಡುಗೆ ಮಾಡೋಣ, ನಾನಿ ದಾದಿ ಕಿ ಕಹಾನಿ, ಸ್ಥಳೀಯ ಸಸ್ಯವರ್ಗ 70 100 ದಿನಗಳ ಓದುವ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಹತ್ತನೇ ವಾರ ಇನ್ ಬೆಂಕಿಯ ಚಟುವಟಿಕೆ ಇಲ್ಲದೆ ಅಡುಗೆ ತಯಾರಿಸುವುದು ಉದಾಹರಣೆಗೆ ಪ್ರೊಟ್ ಸಲಾಡ್ ಚುರುಮರಿ ಮುಂತಾದವು ತಯಾರಿಸಲಾಯಿತು. ನಾನಿ ದಾದಿ ಕಿ ಕಹಾನಿಯಲ್ಲಿ ಅಜ್ಜ ಅಜ್ಜಿ ಹೇಳಿದ ಕಥೆಗಳನ್ನು ಮಕ್ಕಳು ಶಾಲೆಯಲ್ಲಿ ಓದಿದರು. ಹಾಗೂ ಸ್ಥಳೀಯ ಸಸ್ಯವರ್ಗದ ಅನ್ವೇಷಣೆಯಲ್ಲಿ ಮಕ್ಕಳು ತಮ್ಮ ಸ್ಥಳೀಯವಾಗಿ ಸಿಗುವ ತರಕಾರಿಗಳನ್ನು ಹಾಗೂ ಹಣ್ಣುಗಳನ್ನು ಮತ್ತು ಸಸ್ಯಗಳನ್ನು ಪಟ್ಟಿ ಮಾಡಿದರು.
11 11 ನೇ ವಾರ ಗುಂಪು 1,2,3 ಮ್ಯಾಜಿಕ್‌ ಮಂತ್ರ, ಮುಖಪುಟ ಓದುವುದು, ತಿರುವು 70 100 ದಿನಗಳ ಓದುವ ಅಭಿಯಾನ ಕಾರ್ಯಕ್ರಮದಡಿಯಲ್ಲಿ 11 ನೆ ವಾರ ಮ್ಯಾಜಿಕ್ ಮಂತ್ರ ಪುಸ್ತಕವನ್ನು ಅದರ ಪುಟದಿಂದ ನಿರ್ಣಯಿಸುವುದು ಹಾಗೂ ಟ್ವಿಸ್ಟ್ ಮತ್ತು ತಿರುವು ಇವುಗಳಿಗೆ ಸಂಬಂಧಿಸಿದಂತೆ ಅನೇಕ ಚಟುವಟಿಕೆಗಳನ್ನು ಶಾಲಾ ಹಂತದಲ್ಲಿ ತರಗತಿವಾರು ನಿರ್ವಹಿಸಲಾಯಿತು ಮಕ್ಕಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿದರು. ಹಾಗೂ ತಮಗೆ ಇಷ್ಟವಾದ ಕಥೆಗಳನ್ನು ಕವನಗಳನ್ನು ಓದಿ ಅರ್ಥೈಸಿಕೊಂಡರು.
12 12 ನೇ ವಾರ ಗುಂಪು 1,2,3 ಎಲ್ಲವನ್ನು ಬಿಡಿ ಮತ್ತು ಓದಿ 70 100 ದಿನಗಳ ಓದುವ ಅಭಿಯಾನ ಕಾರ್ಯಕ್ರಮದಡಿಯಲ್ಲಿ 12 ನೇ ವಾರ ಎಲ್ಲವನ್ನು ಬಿಡಿ ಮತ್ತು ಓದಿ ಚಟುವಟಿಕೆಯನ್ನು ನಿರ್ವಹಿಸಲಾಯಿತು ನಮ್ಮ ಶಾಲೆಯಲ್ಲಿ ಓದುತ್ತಿರುವ ಎಲ್ಲ ಮಕ್ಕಳು ಶಾಲಾ ಗ್ರಂಥಾಲಯಕ್ಕೆ ಭೇಟಿ ನೀಡಿ ತಮಗೆ ಇಷ್ಟವಾದ ಪುಸ್ತಕಗಳನ್ನು ಓದಿದರು.
13 13 ನೇ ವಾರ ಗುಂಪು 1,2,3 ಅಂತರಾಷ್ಟ್ರೀಯ ಮಾತೃ ಭಾಷಾ ದಿನಾಚರಣೆ  70 100 ದಿನಗಳ ಓದುವ ಅಭಿಯಾನ ಕಾರ್ಯಕ್ರಮದಡಿಯಲ್ಲಿ 13 ನೇ ವಾರ ಅಂತರಾಷ್ಟ್ರೀಯ ಮಾತೃಭಾಷೆ ದಿನಾಚರಣೆ ಅಂಗವಾಗಿ ಮಕ್ಕಳು ತಮ್ಮ ಮಾತೃಭಾಷೆಯಲ್ಲಿ ತಮಗೆ ಇಷ್ಟವಾದ ಪುಸ್ತಕಗಳನ್ನು ಮತ್ತು ಕಥೆಗಳನ್ನು ಓದಿದರು. ಇದರಿಂದ ಮಕ್ಕಳಲ್ಲಿ ಮಾತೃಭಾಷೆಯ ಬಗ್ಗೆ ಗೌರವ ಮೂಡುವುದು.
14 14 ನೇ ವಾರ ಗುಂಪು 1,2,3 ನಮ್ಮ  ನಾಯಕರ ಸ್ಪೂರ್ತಿಯ ಕಥೆಗಳು 70 100 ದಿನಗಳ ಓದುವ ಅಭಿಯಾನ ಕಾರ್ಯಕ್ರಮದಡಿಯಲ್ಲಿ 14vನೇ ವಾರ ನಮ್ಮ ನಾಯಕರು ಸ್ಪೂರ್ತಿಯ ಕಥೆಗಳನ್ನು ಮಕ್ಕಳಿಗೆ ಹೇಳಲಾಯಿತು. ಮಕ್ಕಳು ತಮಗೆ ಇಷ್ಟವಾದ ಸ್ವಾತಂತ್ರ್ಯ ಹೋರಾಟಗಾರರ ಪುಸ್ತಕಗಳನ್ನು ಪಡೆದುಕೊಂಡು ಓದಿದರು. ಸಾಲಾ ಗ್ರಂಥಾಲಯಕ್ಕೆ ಭೇಟಿ ನೀಡಿ ತಮಗೆ ಇಷ್ಟವಾದ ಕಥೆಗಳನ್ನು ಕೂಡ ಓದಿದರು. ಒಟ್ಟಿನಲ್ಲಿ ನೂರು ದಿನಗಳ ಓದು ಅಭಿಯಾನದಿಂದ ಮಕ್ಕಳಲ್ಲಿ ಓದುವ ಹವ್ಯಾಸ ಜ್ಞಾನದ ವಿಕಾಸ ನಾನು ನುಡಿಯಂತೆ ಮಕ್ಕಳಲ್ಲಿ ಓದುವ ಹವ್ಯಾಸವು ಬೆಳೆಯುವುದು.
row11 col 1 row11 col 2 row11 col 3 row11 col 4 row11 col 5 row1 col 5


ಸಂಬಂಧಿಸಿದ ಪೋಟೋಗಳು : 
ವಾರ 1


















ವಾರ 2






















































 



















 

































No comments:

Post a Comment