Tuesday, September 21, 2021

ಮಳೆ ಬಿಲ್ಲು

" ಳೆ ಬಿಲ್ಲು" 2022-23 


 ಕಲಿಕಾ ಚೇತರಿಕೆ ಕಾರ್ಯಕ್ರಮ ಭಾಗವಾಗಿ ಮೇ ತಿಂಗಳಲ್ಲಿ 14 ದಿನಗಳ ಕಾಲ ಮಳೆ ಬಿಲ್ಲು ಕಾರ್ಯಕ್ರಮ ಅನುಷ್ಠಾನ

1) ಮೊದಲ ದಿನ 

ಮಳೆಬಿಲ್ಲು ಕಾರ್ಯಕ್ರಮದ ಉದ್ಘಾಟನೆ ಮತ್ತು  ಆಟದ ಹಬ್ಬ

2) ಎರಡನೇ ದಿನ : ಆಟಿಕೆ ತಯಾರಿಕೆ ಪೇಪರ್ ವಾಚ್, ಪೇಪರ್ ಕಪ್ಪೆ, ಚಿಟ್ಟೆ ತಯಾರಿಕೆ ನಲಿ ಕಲಿ ಮಕ್ಕಳು ಪೇಪರ್ ಟೋಪಿ ಮತ್ತು ಬ್ಯಾಗ್ ತಯಾರಿಸಿದರು




3) 3 ನೇ ದಿನ : ನಾಟಕದ ಹಬ್ಬ 
ಕರೋನ ಕುರಿತು ಸಣ್ಣ ನಾಟಕ ನಮ್ಮೂರ ಜಾತ್ರೆ ಸನ್ನಿವೇಶ
 
 







4) 4 ನೇ ದಿನ ನಾಟಕದ ಹಬ್ಬ
ಕಿತ್ತೂರು ಚನ್ನಮ್ಮ ಸಣ್ಣ ನಾಟಕnನಮ್ಮೂರ ಜಾತ್ರೆ ಸನ್ನಿವೇಶ ಸೃಷ್ಟಿಸಲಾಯಿತು.
 

5) 5 & 6 ನೇ ದಿನ ಚಿತ್ರ ಚಿತ್ತಾರ ಕಲಾ ಹಬ್ಬ ಮತ್ತು ಚಿತ್ರ ಜಗತ್ತು  ಪೇಪರ್ ಸೈಕಲ್ ತಯಾರಿಕೆ, ಮಕ್ಕಳು ಚಿತ್ರ ಬರೆದರು.


6) 7 ನೇ ದಿನ ಕಥೆಗಳ ಹಬ್ಬ ಮಕ್ಕಳೇ ಕಥೆಗಳನ್ನು ಹೇಳಿ ಅಭಿನಯಿಸಿದರು 


7) 8 ನೇ ದಿನ ಕವಿತೆ ಕಟ್ಟೋಣ ಹಾಡು ಹಾಡೋಣ ಕವನ ವಾಚನ


 

8) 9 ನೇ ದಿನ ಪರಿಸರ ಹಬ್ಬ ಎಲೆ ನೋಡಿ ಸಸ್ಯ ಗುರುತಿಸು, ಮುಟ್ಟಿ ನೋಡಿ ತಟ್ಟಿ ಹೇಳು, ನಟನೆ ನೋಡಿ ಚಟುವಟಿಕೆ ಗುರುತಿಸು, ಸಸ್ಯಗಳ ಸಹಿ ಸಂಗ್ರಹ











9) 10 ನೇ ದಿನ ಗಣಿತದ ಗಮ್ಮತ್ತು  ಮಗ್ಗಿ ನೃತ್ಯ
 


10). 11 ನೇ ದಿನ ಇತಿಹಾಸದ ಹಬ್ಬ ಇತಿಹಾಸ ಪರಿಕರಗಳ ಪ್ರದರ್ಶನ 






11) 12 ನೇ ದಿನ ಅಡುಗೆ ಮನೆಯಲ್ಲಿ ವಿಜ್ಞಾನ 




12) 13 ನೇ ದಿನ ಗೊಂಚಲು ಸಾಂಸ್ಕೃತಿಕ ಸಂಭ್ರಮ ವಿವಿಧ ವೇಷಭೂಷಣ, ಜಾನಪದ ನೃತ್ಯ, ಮುಂ.






 
13) 14 ನೇ ದಿನ ಶಾಲೆ ಸಿಂಗಾರ - ಮಕ್ಕಳು ತಯಾರಿಸಿದ ಆಟಿಕೆಗಳ ಪ್ರದರ್ಶನ 
 











ಮಳೆ ಬಿಲ್ಲು – ಮಕ್ಕಳ ಹಬ್ಬ ವರದಿ
ಮಳೆ ಬಿಲ್ಲು ಕಾರ್ಯಕ್ರಮದ ಅಡಿಯಲ್ಲಿ ಶಾಲೆಯಲ್ಲಿ ನಿರ್ವಹಿಸಿದ ಚಟುವಟಿಕೆಗಳ ವಿವರ

 

ದಿನಗಳು

ಚಟುವಟಿಕೆ ಹೆಸರು

ಚಟುವಟಿಕೆ ವಿವರ

ದಿನ 1

 ಆಟದ ಹಬ್ಬ

ಇಂದು ಶಾಲಾ ಪ್ರಾರಂಭೋತ್ಸವ ಮತ್ತು ಕಲಿಕಾ ಚೇತರಿಕೆ ಹಾಗೂ ಮಳೆ ಬಿಲ್ಲು ಕಾರ್ಯಕ್ರಮದ ಉದ್ಘಾಟನೆ ಮಾಡಲಾಯಿತು ಹಾಗೂ ಮಕ್ಕಳಿಂದ ವಿವಿಧ ಆಟಗಳನ್ನು ಆಡಿಸಲಾಯಿತು. ಉದಾ: ಚೌಕಾಬಾರ, ಖೋ ಖೋ, 

ದಿನ 2

 ಆಟಿಕೆ ತಯಾರಿಕೆ

 ಮಳೆಬಿಲ್ಲು ಕಾರ್ಯಕ್ರಮದಡಿ ಆಟಿಕೆಗಳನ್ನು ತಯಾರಿಸಲಾಯಿತು ಗಾಳಿಪಟ ಗಿರಿಗಿಟ್ಲೆ ಮೊರ ಮುಂತಾದವು 4ರಿಂದ 7ನೇ ತರಗತಿಯ ಮಕ್ಕಳು ಖುಷಿಯಿಂದ ಭಾಗವಹಿಸಿದ್ದರು

ದಿನ 3

 ನಾಟಕದ ಹಬ್ಬ

 ಇಂದು ನಾಟಕದ ತಯಾರಿಯನ್ನು ಮಾಡಲಾಯಿತು ಕೊರೋನಾ ಕುರಿತು ಸಣ್ಣ ನಾಟಕ ಇಬ್ಬರು ಮಕ್ಕಳು ಖುಷಿಯಿಂದ ಭಾಗವಹಿಸಿ ನಾಟಕವನ್ನು ಮಾಡಿದರು

ದಿನ 4

 ನಾಟಕದ ಹಬ್ಬ

 ನಾಟಕದ ಹಬ್ಬ ಕಾರ್ಯಕ್ರಮದಲ್ಲಿ ಇಂದು ನಮ್ಮೂರ ಜಾತ್ರೆ ಸನ್ನಿವೇಶವನ್ನು ಸೃಷ್ಟಿಸಲಾಯಿತು ಒಂದರಿಂದ ಏಳನೇ ತರಗತಿಯ ಮಕ್ಕಳು ವಿವಿಧ ರೀತಿಯ ಆಟಿಕೆಗಳನ್ನು ಗೊಂಬೆಗಳನ್ನು ಪೇಪರ್ ನಿಂದ ತಯಾರಿಸಿದ ಕಪ್ಪೆ ಗಾಳಿಪಟ ಗಿರಿಗಿಟ್ಲೆ ಮುಂತಾದವುಗಳನ್ನು ತಾವೇ ವ್ಯಾಪಾರಸ್ಥರಾಗಿ ಮಾರಿದರು ಮಕ್ಕಳು ತಮಗೆ ಇಷ್ಟವಾದ ವಸ್ತುಗಳನ್ನು ಖರೀದಿಸಿದರು ಚಿನ್ನರ ಜಾತ್ರೆಯಲ್ಲಿ ಮಕ್ಕಳು ಸಂತೋಷದಿಂದ ಭಾಗವಹಿಸಿದ್ದರು

ದಿನ 5

 ಚಿತ್ರ ಚಿತ್ತಾರ ಕಲಾ ಹಬ್ಬ

 ಇಂದು ಕಾರ್ಡ್ ಸೀಟ್ ದಿಂದ ವಿವಿಧ ಆಕೃತಿಗಳನ್ನು ತಯಾರಿಸಲಾಯಿತು ಪೇಪರ್ ಸೈಕಲ್, ಮೊರ, ಕಪ್ಪೆ, ಚಿಟ್ಟೆ, ಪೇಪರ್ ಮಾಲೆ ತಯಾರಿಸಿದರು

ದಿನ 6

 ಚಿತ್ರ ಜಗತ್ತು

 ಮಕ್ಕಳು ತಮಗೆ ಇಷ್ಟವಾದ ಚಿತ್ರವನ್ನು ಡ್ರಾಯಿಂಗ್ ಸೀಟ್ ನಲ್ಲಿ ಚಿತ್ರವನ್ನು ಬರೆದರು ಕಾಡಿನ ಚಿತ್ರ, ವಿವಿಧ ಪ್ರಾಣಿ ಪಕ್ಷಿಗಳ ಚಿತ್ರ, ರಂಗೋಲಿಯನ್ನು ಬರೆದರು.

ದಿನ 7

 ಕಥೆಗಳ ಹಬ್ಬ

 ಮಕ್ಕಳಿಗೆ ಕಥೆಗಳೆಂದರೆ ತುಂಬಾ ಇಷ್ಟ. ಮಕ್ಕಳಿಗೆ ಕಥೆಯನ್ನು ಹೇಳಲಾಯಿತು ಮಕ್ಕಳು ಖುಷಿಯಿಂದ ಪಾಲ್ಗೊಂಡರು ಕೆಲವು ಮಕ್ಕಳು ತಾವೇ ಸ್ವತಹ ಕಥೆಗಳನ್ನು ಹೇಳಿದರು.

ದಿನ 8

 ಕವಿತೆ ಕಟ್ಟೋಣ ಹಾಡು ಹಾಡೋಣ

 ಮಳೆಬಿಲ್ಲು ಕಾರ್ಯಕ್ರಮದಡಿ ಇಂದು ಕವಿತೆ ಕಟ್ಟೋಣ ಹಾಡು ಹಾಡೋಣ ಎನ್ನುವ ಶೀರ್ಷಿಕೆಯಡಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ BRP ಗಳಾದ ಶ್ರೀ ವಿಜಯಕುಮಾರ್ ಕರಿಕಟ್ಟಿ ಸರ್ ಅವರು ಆಗಮಿಸಿದ್ದರು ತಾವೇ ಸ್ವತಃ ಬರೆದ ಕವಿತೆಗಳನ್ನು ಹಾಡಿ ಮಕ್ಕಳನ್ನು ರಂಜಿಸಿದರು. ಮಕ್ಕಳು ಕೂಡ ವಿವಿಧ ಹಾಡುಗಳನ್ನು ಹಾಡಿ ಸಂಭ್ರಮಿಸಿದರು.

ದಿನ 9

 ಪರಿಸರ ಹಬ್ಬ

 ಮಳೆಬಿಲ್ಲು ಕಾರ್ಯಕ್ರಮದಡಿ ಇಂದು ಪರಿಸರ ಹಬ್ಬ ಎಂಬ ಶೀರ್ಷಿಕೆಯಡಿ ಎಲೆ ನೋಡಿ ಸಸ್ಯ ಗುರುತಿಸು, ಮುಟ್ಟಿ ನೋಡು ತಟ್ಟಿ ಹೇಳು, ಸಸ್ಯಗಳ ಸಹಿ ಸಂಗ್ರಹ, ನಟನೆ ವೀಕ್ಷಿಸಿ ಚಟುವಟಿಕೆ ಗುರುತಿಸು, ಮುಂತಾದ ಚಟುವಟಿಕೆಗಳನ್ನು ಮಾಡಿಸಲಾಯಿತು.ಮಕ್ಕಳು ವಿವಿಧ ಎಲೆಗಳನ್ನು ಸಂಗ್ರಹಿಸಿ ಕಾರ್ಡ್ ಸೀಟ್ ನಲ್ಲಿ ಅಂಟಿಸಿ ಸಸ್ಯಗಳನ್ನು ಗುರುತಿಸಿದರು.ಮತ್ತು ಡಬ್ಬಿಯಲ್ಲಿ ಹಾಕಿದ ಚೀಟಿ ಹೊರ ತೆಗೆದು ಅದರಲ್ಲಿನ ವಿಷಯದ ಕುರಿತು ನಟನೆ ಮಾಡಿದರು ಉಳಿದ ಮಕ್ಕಳು ಗುರುತಿಸಿದರು ಎಲ್ಲಾ ಮಕ್ಕಳೂ ಸಂತೋಷದಿಂದ ಭಾಗವಹಿಸಿದ್ದರು.

ದಿನ 10

 ಗಣಿತದ ಗಮ್ಮತ್ತು

 ಇಂದು ಗಣಿತದ ಗಮ್ಮತ್ತು ಕಾರ್ಯಕ್ರಮದಡಿ ಮಕ್ಕಳು ವಿವಿಧ ಗಣಿತಕ್ಕೆ ಸಂಬಂಧಿಸಿದ ವಿನೋದ ಆಟಗಳನ್ನು ಆಡಿದರು. ವೃತ್ತದಲ್ಲಿ ಭಾಗವಹಿಸಿ ಕೆರೆ ದಡ ಆಟದ ರೀತಿಯಲ್ಲಿ ಸರಿ ಬೆಸ ಸಂಖ್ಯೆಗಳ ಆಟವನ್ನು ಆಡಿದರು ಜೊತೆಗೆ ಗುಣಕದ ಆಟವನ್ನು ಕೂಡ ಮಾಡಿದರು 2 ರಿಂದ 10ರ ವರೆಗೆ ಮಗ್ಗಿಗಳನ್ನು ಹಾಡಿನ ಮೂಲಕ ಅಭಿನಯಿಸಿದರು.

ದಿನ 11

 ಇತಿಹಾಸದ ಹಬ್ಬ     

 ಇತಿಹಾಸದ ಹಬ್ಬದ ಕಾರ್ಯಕ್ರಮದಡಿ ಇಂದು ಮಕ್ಕಳಿಗೆ ಇತಿಹಾಸದ ಪರಿಕರಗಳು ಪರಿಚಯವನ್ನು ಮಾಡಿಕೊಡಲಾಯಿತು ಮತ್ತು ನಮ್ಮ ಪೂರ್ವಜರ ಹಾಗೂ ರಾಜರುಗಳ ಪರಿಚಯವನ್ನು ವೇಷಭೂಷಣಗಳ ಮೂಲಕ ಮಕ್ಕಳಿಗೆ ಪರಿಚಯ ನೀಡಲಾಯಿತು ಹಳೆಯ ನಾಣ್ಯಗಳ ಪರಿಚಯವನ್ನು ಮಾಡಿಕೊಡಲಾಯಿತು. ತಮ್ಮ ಊರಿನ ನಕ್ಷೆಯನ್ನು ಚಿತ್ರದ ಮೂಲಕ ಮಕ್ಕಳಿಗೆ ತಿಳಿಸಿಕೊಡಲಾಯಿತು.

ದಿನ 12

 ಅಡುಗೆ ಮನೆಯಲ್ಲಿ ವಿಜ್ಞಾನ

 ಅಡುಗೆ ಮನೆ ವಿಜ್ಞಾನ ಕಾರ್ಯಕ್ರಮದಡಿ ಮಕ್ಕಳು ವಿವಿಧ ತರಕಾರಿಗಳನ್ನು ಶಾಲೆಗೆ ತಂದಿದ್ದರು ತರಕಾರಿಗಳನ್ನು ಒಂದೆಡೆ ಸೇರಿಸಿ ತೇಲುವ ವಸ್ತುಗಳು ಹಾಗೂ ಮುಳುಗುವ ವಸ್ತುಗಳ ಚಟುವಟಿಕೆಯನ್ನು ಮಾಡಿಸಲಾಯಿತು. ಕರಗುವ ಮತ್ತು ಕರಗದೆ ಇರುವ ವಸ್ತುಗಳ ಪಟ್ಟಿಯನ್ನು ಸಿದ್ಧಪಡಿಸಲಾಯಿತು. ನೀರು ಬಣ್ಣ ಬದಲಾಯಿಸುತ್ತದೆ ಎಂಬ ಚಟುವಟಿಕೆಯನ್ನು ನೀರಿನಲ್ಲಿ ಅರಿಶಿನ ಪುಡಿಯನ್ನು ಹಾಕಿದಾಗ ನೀರು ಹಳದಿ ಬಣ್ಣಕ್ಕೆ ತಿರುಗಿತ್ತು. ಮಕ್ಕಳು ತಂದ ತರಕಾರಿಗಳನ್ನು ಕತ್ತರಿಸಿ ಕಾರು, ಸೈಕಲ್, ಸಸ್ಯ ಹಾಗೂ ವಿವಿಧ ಆಕೃತಿಗಳನ್ನು ಮಾಡಲಾಯಿತು.

ದಿನ 13

  ಗೊಂಚಲು ಸಾಂಸ್ಕೃತಿಕ ಸಂಭ್ರಮ

 ಮಳೆಬಿಲ್ಲು ಕಾರ್ಯಕ್ರಮದಡಿ ಇಂದು ಗೊಂಚಲು ಸಾಂಸ್ಕೃತಿಕ ಸಂಭ್ರಮ ಚಟುವಟಿಕೆಯಲ್ಲಿ ಮಕ್ಕಳು ಅತ್ಯಂತ ಸಂತೋಷದಿಂದ ಭಾಗವಹಿಸಿದ್ದರು. ಈ ದಿನದ ಕಾರ್ಯಕ್ರಮಕ್ಕೆ ನೂತನ BRP ಗಳಾದ ಶ್ರೀಧರ್ ಸರ್ ಅವರು ಆಗಮಿಸಿ ಚಟುವಟಿಕೆಯಲ್ಲಿ ಭಾಗವಹಿಸಿದರು. ಮಕ್ಕಳು ವಿವಿಧ ವೇಷಭೂಷಣಗಳನ್ನು ಹಾಕಿಕೊಂಡು ಬಂದಿದ್ದರು & ಬೇರೆ ಬೇರೆ ರಾಜ್ಯದ ಉಡುಗೆ-ತೊಡುಗೆಗಳನ್ನು ತೊಟ್ಟಿದ್ದರು. ಜಾನಪದ ಹಾಡುಗಳನ್ನು ಹಾಡಿದರು & ನೃತ್ಯ ಮಾಡಿದರು. ಈ ದಿನದ ಚಟುವಟಿಕೆಯಲ್ಲಿ ಮಕ್ಕಳು ಅತ್ಯಂತ ಖುಷಿಯಿಂದ ಭಾಗವಹಿಸಿ ಸಂಭ್ರಮಿಸಿದರು.

ದಿನ 14

ಶಾಲೆ ಸಿಂಗಾರ 

 ಮಳೆಬಿಲ್ಲು ಕಾರ್ಯಕ್ರಮದಲ್ಲಿ ಇಂದು ಕೊನೆಯ ದಿನ ಶಾಲೆ ಸಿಂಗಾರ ಚಟುವಟಿಕೆಯನ್ನು ಮಕ್ಕಳು ಅತ್ಯಂತ ಸಂಭ್ರಮದಿಂದ ಆಚರಿಸಿದರು ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಿದ್ದರು ಮತ್ತು ತಯಾರಿಸಿದ ಕಾಗದದ ಆಟಿಕೆಗಳನ್ನು ಪ್ರದರ್ಶನಕ್ಕೆ ಇಟ್ಟು ಪ್ರದರ್ಶಿಸಿದರು. ತಾವು ತಯಾರಿಸಿದ ಪೇಪರ್ ವಾಚ್ ಪೇಪರ್ ಟೋಪಿ ಪೇಪರ್ ಬ್ಯಾಗ್ ಮತ್ತು ಪೇಪರ್ ಕನ್ನಡಕಗಳನ್ನು ಹಾಕಿಕೊಂಡು ಸಂಭ್ರಮದಿಂದ ಕುಣಿದಾಡಿದರು. 14ದಿನಗಳ ಮಳೆಬಿಲ್ಲು ಕಾರ್ಯಕ್ರಮದಡಿ ವಿವಿಧ 14 ಚಟುವಟಿಕೆಗಳಲ್ಲಿ ಮಕ್ಕಳು ಅತ್ಯಂತ ಸಂಭ್ರಮದಿಂದ ಭಾಗವಹಿಸಿದ್ದರು. ಮಕ್ಕಳು ಶಾಲೆಯಲ್ಲಿ ಹಬ್ಬದ ವಾತಾವರಣವನ್ನು ನಿರ್ಮಿಸಿದ್ದರು.

 



No comments:

Post a Comment