2024-25 ನೇ ಶೈಕ್ಷಣಿಕ ವರ್ಷದಲ್ಲಿ ನಮ್ಮ ಶಾಲೆಯಲ್ಲಿ ನಡೆದ ಪ್ರಮುಖ ಕಾರ್ಯಕ್ರಮಗಳು:-
4. 18.6.2024 ರಂದು ಬೆಳಗ್ಗೆ 10.30 ಗಂಟೆಗೆ ಡೆಂಗ್ಯೂ ಜ್ವರ ನಿಯಂತ್ರಣ ಕುರಿತು ಅರಿವು ಕಾರ್ಯಕ್ರಮ ಆಯೋಜಿಸಲಾಗಿತ್ತು. SDMC ಸದಸ್ಯರು, ಪಾಲಕರು, ಮಕ್ಕಳು ಭಾಗವಹಿಸಿದ್ದರು. ಪ್ರೊಜೆಕ್ಟರ್ ಮೂಲಕ ಸೊಳ್ಳೆಗಳ ನಿಯಂತ್ರಣ ಕುರಿತು ಅರಿವು ಮೂಡಿಸಲಾಯಿತು.
3. 5.6.2024 ರಂದು ವಿಶ್ವ ಪರಿಸರ ದಿನಾಚರಣೆಯನ್ನು ಸಸಿಗಳನ್ನು ನೆಡುವುದರ ಮೂಲಕ ಆಚರಿಸಲಾಯಿತು. ಸಸ್ಯ ಶ್ಯಾಮಲಾ ಕಾರ್ಯಕ್ರಮ ಆಚರಿಸಲಾಯಿತು.
2. 1.6.2024 ಮಿಂಚಿನ ಸಂಚಾರ ಪ್ರಯುಕ್ತ ನಮ್ಮ ಶಾಲೆಗೆ ಶ್ರೀಮತಿ ಸಾವಿತ್ರಿ ಕೋಳಿ ಮೇಡಮ್ ಶ್ರೀ ಹುಬ್ಬಳ್ಳಿ ಸರ್ ಹಾಗೂ ಶ್ರೀ ತಿಮ್ಮಾರೆಡ್ಡಿ ಸರ್ ಮತ್ತು ಶ್ರೀಮತಿ ಗಾಯತ್ರಿ ಕಮ್ಮಾರ ಮೇಡಮ್ ಅವರು ಭೇಟಿ ನೀಡಿ ಪರಿಶೀಲನೆ ಮಾಡಿ ಮಾರ್ಗದರ್ಶನ ಮಾಡಿದರು.
1. 31-5-2024 ಶಾಲಾ ಪ್ರಾರಂಭೋತ್ಸವ ವಿವರ Photo gallary ಯಲ್ಲಿ ಬೆಳಗ್ಗೆ 10.00 ಗಂಟೆಗೆ ಮಕ್ಕಳನ್ನು ಸಿಹಿ ವಿತರಿಸಿ ಆರತಿ ಮಾಡಿ ಸ್ವಾಗತ ಮಾಡಿಕೊಳ್ಳಲಾಯಿತು. SDMC ಸದಸ್ಯರು, ಪಾಲಕರು ಆಗಮಿಸಿದ್ದರು.
2023-24 ನೇ ಶೈಕ್ಷಣಿಕ ವರ್ಷದಲ್ಲಿ ನಮ್ಮ ಶಾಲೆಯಲ್ಲಿ ನಡೆದ ಪ್ರಮುಖ ಕಾರ್ಯಕ್ರಮಗಳು:-
1)31-5-2023 ಶಾಲಾ ಪ್ರಾರಂಭೋತ್ಸವ ವಿವರ Photo gallary ಯಲ್ಲಿ
2) 23-06-2023 ಮಕ್ಕಳಿಗೆ ಬೇಯಿಸಿದ ಮೊಟ್ಟೆ ವಿರಿಸಲಾಯಿತು ವಿವರ Photo gallary ಯಲ್ಲಿ
2022-23 ನೇ ಶೈಕ್ಷಣಿಕ ವರ್ಷದಲ್ಲಿ ನಮ್ಮ ಶಾಲೆಯಲ್ಲಿ ನಡೆದ ಪ್ರಮುಖ ಕಾರ್ಯಕ್ರಮಗಳು:-
1) 14 &15 ಶಾಲಾ ಸ್ವಚ್ಚತಾ ಕಾರ್ಯ
2) ದಿನಾಂಕ 16-5-2022 ರಂದು ಕಲಿಕಾ ಚೇತರಿಕೆ ಕಾರ್ಯಕ್ರಮದೊಂದಿಗೆ 2022 - 23 ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಾಧಿಕಾರಿಗಳಾದ ಶ್ರೀ ಮಂಜುನಾಥ ಅಡಿವೇರ್ sir ಹಾಗೂ ನವಲೂರ ಕ್ಲಸ್ಟರ್ CRP ಗಳಾದ ಶ್ರೀಮತಿ ಗಾಯತ್ರಿ ಕಮ್ಮಾರ ಮೇಡಮ್ ಇವರು ಭಾಗವಹಿಸಿದ್ದರು.
3) ಮೊದಲ ಎರಡು ವಾರ ಅಂದರೆ 14 ದಿನ ಮಳೆ ಬಿಲ್ಲು ಕಾರ್ಯಕ್ರಮದಲ್ಲಿ ವಿವಿಧ ಚಟುವಟಿಕೆಗಳ ನಿರ್ವಹಣೆ ( ನಿರ್ವಹಿಸಿದ ಚಟುವಟಿಕೆಗಳ ಮಾಹಿತಿಗಾಗಿ ಮಳೆ ಬಿಲ್ಲು page ನೋಡುವುದು.)
4) ದಿನಾಂಕ 1-6-2022 ರಂದು ಶಾಲಾ ಸಂಸತ್ ನ್ನು EVM ಬಳಸಿ ಚುನಾವಣೆ ಮೂಲಕ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಯಿತು.ಮತ್ತು ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ಕೂಡ ಮಾಡಲಾಯಿತು. ಈ ಚುನಾವಣೆ ಪ್ರಕ್ರಿಯೆಯಲ್ಲಿ ಮಕ್ಕಳು ಖುಷಿಯಿಂದ ಮತ್ತು ಕುತೂಹಲದಿಂದ ಭಾಗವಹಿಸಿದ್ದರು.
5) ದಿನಾಂಕ: 07/06/2022 ವಿಶ್ವ ಪರಿಸರ ದಿನಾಚರಣೆ ಡೈಟ್ ನ ಹಿರಿಯ ಉಪನ್ಯಾಸಕರಾದ ಶ್ರೀ ನಾಗನೂರ್ ಸರ್ ಅವರು ಭಾಗವಹಿಸಿದ್ದರು
6) ದಿನಾಂಕ 21/06/2022 ರಂದು ವಿಶ್ವ ಯೋಗ ದಿನಾಚರಣೆ ಆಚರಿಸಲಾಯಿತು.
7) ದಿನಾಂಕ 22-07-2022 ರಂದು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕ್ರೀಡಾಕೂಟ ಕುರಿತು ಪೂರ್ವಭಾವಿ ಸಭೆಯನ್ನು hps Navalur Chavani ಶಾಲೆಯಲ್ಲಿ ನವಲೂರ ಕ್ಲಸ್ಟರ್ ಪ್ರಧಾನ ಗುರುಗಳ ಸಭೆಯನ್ನು ಆಯೋಜಿಸಲಾಯಿತು.
8) ದಿನಾಂಕ:4-8-2022 ರಂದು ಕಲಿಕಾ ಚೇತರಿಕೆ ಮಾಸಾಚರಣೆ ಆಚರಿಸಲಾಯಿತು.
9) ದಿನಾಂಕ: 6-8-2022 ರಂದು ವಿಶ್ವ ಕೈ ತೊಳೆಯುವ ದಿನಾಚರಣೆ ಆಚರಿಸಲಾಯಿತು.ಮಕ್ಕಳಿಗೆ ಆರೋಗ್ಯದ ಬಗ್ಗೆ ಜಾಗ್ರತೆ ಮೂಡಿಸಿ ಕೈ ತೊಳೆಯುವ ಮಹತ್ವವನ್ನು ತಿಳಿಸಲಾಯಿತು.
10) ದಿನಾಂಕ: 10-8-2022 ರಂದು ಜಂತು ಹುಳು ನಿವಾರಣಾ ದಿನಾಚರಣೆ ಅಂಗವಾಗಿ ಮಕ್ಕಳಿಗೆ ಅಲ್ ಬೆಂಡಜೋಲ ಮಾತ್ರೆ ನೀಡಲಾಯಿತು.
11) ದಿನಾಂಕ:11-8-2022 ಹರ್ ಘರ್ ತಿರಂಗಾ ಅಭಿಯಾನವನ್ನು ಯಶಸ್ವಿಗೊಳಿಸಲು ಪ್ರಭಾತ ಫೇರಿ
12) ದಿನಾಂಕ 13-15/8/2022 ಹರ್ ಘರ್ ತಿರಂಗಾ ಅಭಿಯಾನವನ್ನು ಆಯೋಜಿಸಲಾಗಿದೆ.ಪ್ರಯುಕ್ತ ಮೂರು ದಿನಗಳು ಶಾಲೆಯಲ್ಲಿ ಧ್ವಜಾರೋಹಣ ನೆರವೇರಿಸಿದೇವು
13) ದಿನಾಂಕ 15-8-2022 76 ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಿಂದ ಆಚರಿಸಲಾಯಿತು.
14) ದಿನಾಂಕ 1-9-2022 RBSK ಕಾರ್ಯಕ್ರಮ ಮಕ್ಕಳ ಆರೋಗ್ಯ ತಪಾಸಣೆ 5 ಮಕ್ಕಳನ್ನು ಮುಂದಿನ ಚಿಕೆತ್ಸಗೆ ಶಿಫಾರಸ್ಸು ಮಾಡಿದ್ದಾರೆ.
15) ದಿನಾಂಕ 12.9.2022 ಇಂದು ನೂತನ SDMC ರಚನೆ ಕುರಿತು ಪಾಲಕರ ಸಭೆ ಕರೆಯಲಾಗಿತ್ತು. ಅದರಂತೆ 18 ಜನ ಸದಸ್ಯರುಗಳ ಸಮಿತಿಯನ್ನು ಊರಿನ ಎಲ್ಲಾ ಹಿರಿಯರು ಹಾಗೂ ಎಲ್ಲಾ ಮಕ್ಕಳ ಪಾಲಕರು ಸೇರಿ ಆಯ್ಕೆ ಮಾಡಿ *ಹೊಸ SDMC ರಚನೆಯನ್ನು ಮಾಡಲಾಯಿತು*
2021-22 ನೇ ಶೈಕ್ಷಣಿಕ ವರ್ಷದಲ್ಲಿ ನಮ್ಮ ಶಾಲೆಯಲ್ಲಿ ನಡೆದ ಪ್ರಮುಖ ಘಟನೆಗಳು
1) ಪ್ರಸಕ್ತ ವರ್ಷದ ಶೈಕ್ಷಣಿಕ ವರ್ಷ ಪ್ರಾರಂಭ ದಿನ : 15.6.2021

No comments:
Post a Comment